Friday, November 7, 2008

ತುಡಿತ

ಹಾರಾಡುವ ಹಕ್ಕಿಗಳು
ಚಲಿಸುವ ಮೋಡಗಳನ್ನು
ನೋಡುತ್ತಾ ಇನ್ನೆಷ್ಟು ದಿನ
ಹೀಗೆಯೇ ಕುಳಿತಿರಲಿ?
ಕಿಟಕಿಯ ಸರಳುಗಳ ಹಿಂದೆ.

ಅವರಿವರಿಗೆ ನೋವಾದೀತೆಂದು
ಭಾವನೆಗಳ ಬಚ್ಚಿಟ್ಟು
ಇನ್ನೆಷ್ಟು ದಿನ ಕಳೆಯಲಿ?
ನಗುಮೊಗವ ಹೊತ್ತು

ಸಂಕೋಲೆಗಳ ಹಿಂದಿನ ಬದುಕು ಸಾಕಾಗಿದೆ
ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ.

4 comments:

neelihoovu said...

ಸಂಕೋಲೆಗಳ ಹಿಂದಿನ ಬದುಕು ಸಾಕಾಗಿದೆ
ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ.

ಇದು ಇಷ್ಟವಾಯ್ತು

Mallikarjuna said...

nimma blog chennagide mattu chennagi barediddeera

greeshma said...

ನೀಲಿಹೂವು ಮತ್ತು ಮಲ್ಲಿಕಾರ್ಜುನ್ ಅವರೆ, ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಥ್ಯಾಂಕ್ಸ್.

shivu said...

ಗ್ರೀಷ್ಮ್ ಮೇಡಮ್,

ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ....

ಈ ಸಾಲು ಇಷ್ಟವಾಯಿತು....ನನ್ನ ಗುರಿಯೂ ಅದೇ !