Saturday, November 8, 2008

ಮತ್ತೊಂದು ಮುಖ

ಅದೊಂದು ಭಯಾನಕ ಜಗತ್ತು

ಅಲ್ಲಿರುವವರು ಮನುಷ್ಯರೋ ಎಂಬ ಅನುಮಾನ

ಅಲ್ಲ, ಕೇವಲ ಮನುಷ್ಯರ ಮುಖವಾಡ ಧರಿಸಿರುವವರು

ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ

ಬಣ್ಣ ಬದಲಾಯಿಸುವ ಕಲೆ ಬಲ್ಲವರು

ದೊಡ್ಡ ದೊಡ್ಡ ಪುಸ್ತಕಗಳನ್ನೋದಿ

ಪದವಿಯ ಮೇಲೆ ಪದವಿ ಪಡೆದವರು

ಆದರೇನು ಬಂತು?

ಮೌಲ್ಯ ಆದರ್ಶಗಳನ್ನೆಲ್ಲ ಗಾಳಿಗೆ ತೂರಿದವರು!

ಸೆಮಿನಾರುಗಳಲ್ಲಿ ಪುಟಗಟ್ಟಲೆ ಪ್ರಬಂಧ ಮಂಡಿಸಿ

ಘನವಿದ್ವಾಂಸರಂತೆ ಫೋಸು ಕೊಡುವವರು

ಆದರೆ ಯಾರದೋ ಮೇಲಿನ ದ್ವೇಷಕ್ಕೆ

ಮತ್ಯಾರನ್ನೋ ಬಲಿಪಶು ಮಾಡುವ ಸಣ್ಣವರು

ಬುದ್ಧಿಜೀವಿಗಳು, ವಿಚಾರವಾದಿಗಳು, ಪ್ರಗತಿಪರರು

ಎಂಬ ಹಣೆಪಟ್ಟಿ ಹಚ್ಚಿಸಿಕೊಂಡ ದೊಡ್ಡಮನುಷ್ಯರು

ಆದರೂ ತಮ್ಮೊಳಗಿನ ಸಣ್ಣತನಗಳನ್ನು ಗೆಲ್ಲಲಾಗದವರು

ಇನ್ನೊಬ್ಬರ ಯಶಸ್ಸು ಕಂಡು ಕರುಬುವವರು

ಸ್ನೇಹಿತರಂತೆ ನಟಿಸಿ ಕಾಲೆಳೆಯುವವರು

ಸಂದರ್ಭಕ್ಕಾಗಿ ಹೊಂಚುಹಾಕಿ ಕುಳಿತುಕೊಳ್ಳುವವರು

ಅಂದರೆ ಗುಳ್ಳೆನರಿಗಳಂಥವರು

ಸಿಕ್ಕಿದಾಗ ಬಿಡದೆ ಬೇಕಾದಂತೆ ಉಪಯೋಗಿಸಿಕೊಳ್ಳುವವರು

ಅಂಥವರಿಗಿರುವ ಹೆಸರೇ ಅವಕಾಶವಾದಿಗಳು

ಹೊರಗೆ ಸಭ್ಯರಂತೆ ಮೆರೆಯುವವರು

ಒಳಗೆ ಅತ್ತಿಯ ಹಣ್ಣಿನಂತೆ ಹುಳುಕು ತುಂಬಿದವರು

ಪ್ರತಿಷ್ಠೆ-ಹುದ್ದೆ-ಪ್ರಶಸ್ತಿಗಳಿಗಾಗಿ ಕಚ್ಚಾಡುವವರು

ಅದಕ್ಕಾಗಿ ಎಂಥವರ ಬಳಿ ಹಲ್ಲುಗಿಂಜಲೂ ಹೇಸದವರು

ಇಂಥವರು ಉನ್ನತ ಶಿಕ್ಷಣದ ಬೋಧಕರು

ಇಲ್ಲಿ ಬರೀ ಸ್ವಾರ್ಥ ದ್ವೇಷ ಅಸೂಯೆ ಅನುಮಾನ

ಸ್ನೇಹ-ಪ್ರೀತಿ-ವಿಶ್ವಾಸ-ಪ್ರಾಮಾಣಿಕತೆಗಿಲ್ಲ ಯಾವ ಸ್ಥಾನಮಾನ

ಹೇಳುವುದು ಆಚಾರ ತಿನ್ನುವುದು ಬದನೇಕಾಯಿ

ಎನ್ನುತ್ತಾರಲ್ಲ ಹಾಗೆ

ಮುಖವಾಡಗಳಲ್ಲೇ ಬದುಕುವ ಇಂಥವರಿಗೆ

ಆತ್ಮಸಾಕ್ಷಿ ಚುಚ್ಚುವುದಿಲ್ಲವೇ ?


7 comments:

Anonymous said...

ಕವನ ಚೆನ್ನಾಗಿದೆ.

Harisha - ಹರೀಶ said...

ಆತ್ಮಸಾಕ್ಷಿ ಚುಚ್ಚಿ ಚುಚ್ಚಿ ಮೊಂಡಾಗಿಬಿಟ್ಟಿರುತ್ತದೆ.. ಚುಚ್ಚಿದರೂ ಏನೂ ಆಗುವುದಿಲ್ಲ.

ಸುಧೇಶ್ ಶೆಟ್ಟಿ said...

modala baari nimma blog oduthiruvudu... chennaagi baritheera.... ee kavanadalli vyaktha padisiruva bhaavagalu svantha anubhavavanne heluvanthide.

heege bareyuththiri.

- sudesh

Anonymous said...

ನಾವು ಬರೆದಿದ್ದನ್ನ ಯಾರಾದ್ರೂ ಓದಿದ್ರೆ, ಮೆಚ್ಚಿಕೊಂಡರೆ ತುಂಬ
ಖುಷಿ ಆಗತ್ತೆ . . .ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಥ್ಯಾಂಕ್ಸ್ ಕಣ್ರಿ . .

ತೇಜಸ್ವಿನಿ ಹೆಗಡೆ said...

ಇನ್ನೆರಡು ಸಾಲುಗಳನ್ನೂ ಸೇರಿಸಬೇಕಿತ್ತು ಕೊನೆಯಲ್ಲಿ..

"ಆತ್ಮವನ್ನು ನಂಬದವರು...
ಆತ್ಮಸಾಕ್ಷಿಯಿಲ್ಲದವರು!"

ಚೆನ್ನಾಗಿದೆ ಗ್ರೀಷ್ಮಗಾನ.

Anonymous said...

ಥ್ಯಾಂಕ್ಯೂ ತೇಜಸ್ವಿನಿ .

shivu.k said...

ಗ್ರೀಷ್ಮ ಮೇಡಮ್,

ಕವನದಲ್ಲಿ ಬೈಯ್ಯುವುದಾದರೆ ಹೀಗೆ ಬರೆಯಬೇಕು ! ಚೆನ್ನಾಗಿ ಬರೆದಿದ್ದೀರಿ......ಆತ್ಮವೇ ಇಲ್ಲದವರು ಹೀಗೆಲ್ಲಾ ಮಾಡುತ್ತಾರೆ ಅಲ್ಲವಾ ?